ಮುಂಬೈ, ಜೂ. 01 (DaijiworldNews/AK): ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ವರೆಗೆ ಮಿಂಚುತ್ತಿದ್ದಾರೆ. ಸದ್ಯ ಅವರು ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲೇ ಬ್ಯುಸಿ ಆಗುತ್ತಿದ್ದಾರೆ. ಅವರ ಸಂಭಾವನೆ ಸ್ಟಾರ್ ಹೀರೋಗಳಿಗೆ ಸರಿ ಸಮಾನವಾಗಿದೆ. ಈ ಎಲ್ಲಾ ಕಾರಣದಿಂದ ಸ್ಯಾಂಡಲ್ವುಡ್ಗೆ ಅವರು ಮತ್ತೆ ಅಗಮಿಸುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರ ಹಿಂದಿ ಸಿನಿಮಾದ ಸಂಭಾವನೆ ಚರ್ಚೆ ಹುಟ್ಟುಹಾಕಿದೆ.

ರಶ್ಮಿಕಾ ಮಂದಣ್ಣ ಅವರು ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಲ್ಲಿನ ಪ್ರೇಕ್ಷಕರು ಅವರನ್ನು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದಲೇ ರಶ್ಮಿಕಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ಗಳು ಬರುತ್ತಿವೆ. ‘ಛಾವಾ’ ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ.
ಈಗ ರಶ್ಮಿಕಾ ಮಂದಣ್ಣ ನಟನೆಯ ‘ಕಾಕ್ಟೇಲ್ 2’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ರಶ್ಮಿಕಾ ಅವರು ಬರೋಬ್ಬರಿ 15 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದು ಅವರ ವೃತ್ತಿ ಜೀವನದಲ್ಲೇ ಅತ್ಯಂತ ಗರಿಷ್ಠ ಸಂಭಾವನೆ ಎಂದು ವರದಿ ಆಗಿದೆ.
ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಕೂಡ ನಟಿಸಿದ್ದಾರೆ. ಕೃತಿ ಅವರು ರಶ್ಮಿಕಾಗೆ ಸರಿಸಮಾನವಾಗಿ ಹಣ ಪಡೆದರೆ, ಶಾಹಿದ್ ಕಪೂರ್ ಅವರು 35 ಕೋಟಿ ರೂಪಾಯಿ ಬಾಚಿಕೊಂಡಿದ್ದಾರೆ. ರಶ್ಮಿಕಾ ಅವರು ಕೃತಿಗೆ ಜೂನಿಯರ್. ಆದಾಗ್ಯೂ ಇಬ್ಬರಿಗೂ ಒಂದೇ ರೀತಿಯ ಸಂಭಾವನೆ ಸಿಗುತ್ತಿದೆ ಎಂದು ಅನೇಕರು ಹೇಳಿದ್ದಾರೆ. ‘ಕಾಕ್ಟೇಲ್ 2’ ಸಿನಿಮಾ ಜೂನ್ 19ರಂದು ರಿಲೀಸ್ ಆಗುತ್ತಿದೆ.