ಚೆನ್ನೈ, ಮೇ. 16 (DaijiworldNews/AA): ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಜಯಂ ರವಿ ತನಗೆ ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಚಣೆ ಮಾಡಿದ್ದಾರೆ.

ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಯಂ ರವಿ, "ನನ್ನನ್ನು ಗುಲಾನಂತೆ ಇರಿಸಿಕೊಳ್ಳಲಾಗಿತ್ತು. ನನಗೆ ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸಲ್ಲ. ನನಗೆ ಆಗಿರುವ ಅವಮಾನಗಳು, ಹಾನಿ ಆಗಿರುವ ನನ್ನ ಖಾಸಗಿ ಬದುಕು ಎಲ್ಲವನ್ನೂ ನಾನು ಸರಿ ಮಾಡಿಕೊಳ್ಳುವೆ. ಅಲ್ಲಿಯ ವರೆಗೆ ನನಗೆ ನಟಿಸಲು ಆಗುವುದಿಲ್ಲ. ನಾನು ಸುಮ್ಮನೆ ಕೂರುವುದೂ ಇಲ್ಲ. ಎಲ್ಲ ಸತ್ಯವನ್ನು ಹೊರಗೆ ತೆಗೆದುಕೊಂಡು ಬರುವೆ, 14 ವರ್ಷಗಳಿಂದ ಸುಮ್ಮನಿದ್ದೆ, ಆದರೆ ಇನ್ನು ಮುಂದೆ ನಾನು ಸುಮ್ಮನೆ ಕೂರುವುದಿಲ್ಲ" ಎಂದು ಕಿಡಿಕಾರಿದ್ದಾರೆ.
"ಆನ್ಲೈನ್ ನಿಂದನೆ ಮಾಡುವವರ ವಿರುದ್ಧ ಹೋರಾಡುತ್ತೇನೆ. ನನ್ನ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತೀರಿ, ಮಕ್ಕಳ ಫೀಸು 90 ಲಕ್ಷ ರೂಪಾಯಿ ಕಟ್ಟುತ್ತಿದ್ದೇನೆ. ಸಣ್ಣ ಮಗನ ಜೊತೆಗೆ ಪ್ರತಿದಿನ ಚೆಸ್ ಆಡುತ್ತಿದ್ದೆ. ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತಾರೆ. ಈಗ ನನ್ನ ಮಕ್ಕಳನ್ನೇ ನೋಡಲು ಬಿಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಜೊತೆಗೆ ಕಳಿಸುತ್ತಿದ್ದಾರೆ" ಎಂದಿದ್ದಾರೆ.
"ನಾನು ಇದ್ದಾಗ ನನ್ನನ್ನು ಗುಲಾಮನಂತೆ ನೋಡಿದರು. ಇರಬೇಕಾದರೆ ನೋಡಿಕೊಳ್ಳಲು ಆಗಲಿಲ್ಲ ಎಂದಮೇಲೆ, ಇಲ್ಲದೇ ಇದ್ದಾಗ ಮುಚ್ಚಿಕೊಂಡು ಇರಬೇಕು. ನಾನು ಸಾಕಷ್ಟು ನೊಂದಿದ್ದೀನಿ, ಈ ಆನ್ಲೈನ್ ನಿಂದನೆಯಿAದ ಇನ್ನಷ್ಟು ನೋಯಿಸಬೇಡಿ. ಈಗಾಗಲೇ ಒಬ್ಬ ಮಹಿಳೆಯನ್ನು ಹಾಳು ಮಾಡಿದ್ದೀರಿ, ಚೆನ್ನೈನಿಂದ ದೂರ ಹೋಗುವಂತೆ ಮಾಡಿದ್ದೀರಿ (ಗೆಳತಿ ಕೆನೀಶಾ ಚೆನ್ನೈ ಬಿಟ್ಟು ಹೋದ ಬಗ್ಗೆ) ಇದನ್ನು ಮುಂದುವರೆಸಬೇಡಿ, ಮುಂದಿನ ದಿನಗಳಲ್ಲಿ ಸಾಕಷ್ಟು ಸತ್ಯಗಳು ಹೊರಗೆ ಬರಲಿವೆ" ಎಂದು ಹೇಳಿದ್ದಾರೆ.
ರವಿ, ತಮ್ಮ ಪತ್ನಿ ಆರತಿ ಇಂದ ಪ್ರತ್ಯೇಕವಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ರವಿ, ತಮ್ಮ ಮನೆಯನ್ನು ಸಹ ಪತ್ನಿಗೆ ಬಿಟ್ಟುಕೊಟ್ಟಿದ್ದರು. ಆದರೆ ಅವರಿಗೆ ಇನ್ನೂ ಅಧಿಕೃತವಾಗಿ ವಿಚ್ಛೇದನ ದೊರೆತಿಲ್ಲ. ಇನ್ನು ರವಿ ಜೊತೆಗೆ ಆಪ್ತವಾಗಿದ್ದ ಗಾಯಕಿ ಕೆನೀಶಾ ಫ್ರಾನ್ಸಿಸ್ ಈಗ ರವಿ ಅವರ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.