ಚೆನ್ನೈ, ಮೇ. 13 (DaijiworldNews/AA): ನಟಿ ತ್ರಿಶಾ ನಟನೆಯ 'ಕರುಪ್ಪ್' ಸಿನಿಮಾದ ಮಾರ್ನಿಂಗ್ ಶೋಗೆ ಸಿಎಂ ವಿಜಯ್ ಸ್ಪೆಷಲ್ ಪರ್ಮಿಷನ್ ನೀಡಿದ್ದಾರೆ.

ಮೇ 14ರಂದು ತ್ರಿಶಾ ಮತ್ತು ಸೂರ್ಯ ಅಭಿನಯದ 'ಕರುಪ್ಪ್' ಸಿನಿಮಾ ತೆರೆಕಾಣಲಿದ್ದು, ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋಗೆ ವಿಶೇಷ ಅನುಮತಿ ನೀಡಿದ್ದಾರೆ. ಕರುಪ್ಪ್ ಸಿನಿಮಾಗೆ ಸಿಎಂ ವಿಜಯ್ ಅವರು ದಿನಕ್ಕೆ 5 ಶೋಗಳಿಗೆ ಅನುಮತಿ ನೀಡಿದ್ದಾರೆ.
ಈ ಕುರಿತು ಕರುಪ್ಪ್ ಸಿನಿಮಾ ತಂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕರುಪ್ಪ್ ಸಿನಿಮಾಗೆ ಬೆಳಿಗ್ಗೆ 9 ಗಂಟೆಯ ಶೋಗೆ ವಿಶೇಷ ಅನುಮತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.