ಬೆಂಗಳೂರು, ಮೇ. 06 (DaijiworldNews/AK): ‘ಸು ಫ್ರಮ್ ಸೋ’ ಸಿನಿಮಾ ನಿರ್ದೇಶನ ಮಾಡಿ ಅಪಾರ ಜನಪ್ರಿಯತೆ ಪಡೆದ ನಿರ್ದೇಶಕ ಜೆಪಿ ತುಮಿನಾಡು ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೆಪಿ ವಿವಾಹ ಆದ ಹುಡುಗಿಯ ಹೆಸರು ರಶ್ಮಿಕಾ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಜೆಪಿ ಹಾಗೂ ರಶ್ಮಿಕಾ ಫೋಟೋಗಳು ಗಮನ ಸೆಳೆದಿವೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಜೆಪಿ ಹೊಸ ಬಾಳಿಗೆ ಎಲ್ಲರ ಹಾರೈಸಿದ್ದಾರೆ.
ಜೆಪಿ ತುಮಿನಾಡು ಅವರು ಕರಾವಳಿ ಪ್ರತಿಭೆ. ಸಿನಿಮಾ ರಂಗಕ್ಕೆ ಕಾಲಿಡುವ ಮೊದಲು 14 ವರ್ಷ ಅವರು ರಂಗಭೂಮಿಯಲ್ಲಿ ಶ್ರಮಿಸಿದರು. ಅನೇಕ ನಾಟಕಗಳ ರಚನೆ, ನಿರ್ದೇಶನ ಹಾಗೂ ನಟನೆ ಮಾಡಿದರು. ಜೆಪಿ ಅವರು ಹೆಚ್ಚಾಗಿ ಹಾಸ್ಯ ನಾಟಕಗಳನ್ನೇ ಬರೆಯುತ್ತಿದ್ದರು.
‘ಸು ಫ್ರಮ್ ಸೋ’ ಸಿನಿಮಾ ಕೂಡ ಹಾಸ್ಯದ ಶೈಲಿಯಲ್ಲೇ ಮೂಡಿ ಬಂತು. ಈ ಕಾರಣಕ್ಕೆ ಸಿನಿಮಾ 100 ಕೋಟಿ ರೂಪಾಯಿ ಗಳಿಸಿತು. ರಾಜ್ ಬಿ ಶೆಟ್ಟಿ ಅವರು ಸಿನಿಮಾದಲ್ಲಿ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.