ಬೆಂಗಳೂರು, ಮೇ 01(DaijiworldNews/AK): ಮೈಕಲ್ ಜಾಕ್ಸನ್ ಅವರ ಜೀವನ ಆಧಾರಿಸಿದ ಸಿನಿಮಾ ‘ಮೈಕಲ್’ ಏಪ್ರಿಲ್ 24 ರಂದು ಬಿಡುಗಡೆ ಆಗಿದೆ.

ಸಿನಿಮಾಕ್ಕೆ ಮೊದಲ ದಿನ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದೆ. ಏಳು ದಿನಗಳಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡಿದೆ. ಕೇವಲ ಏಳೇ ದಿನದಲ್ಲಿ ‘ಮೈಕಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಮಾತ್ರವಲ್ಲ ಭಾರತದಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದೆ ಈ ಸಿನಿಮಾ.
ಮೈಕಲ್ ಜಾಕ್ಸನ್ ಅವರ ಸಹೋದರನ ಪುತ್ರ ಜಫಾರ್ ಜಾಕ್ಸನ್ ತಮ್ಮ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೇವಲ ಏಳು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 2600 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ‘ಮೈಕಲ್’ ಸಿನಿಮಾ ಗಳಿಸಿದ್ದು, ಅತಿ ಹೆಚ್ಚು ಮೊತ್ತ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯನ್ನು ‘ಮೈಕಲ್’ ಸಿನಿಮಾ ಸಹ ಸೇರಿಕೊಂಡಿದ್ದು, ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾದ ಗಳಿಕೆ ದಿನೇ-ದಿನೇ ಹೆಚ್ಚಾಗುತ್ತಿದೆ. ಈ ಸಿನಿಮಾ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಸಬಹುದು ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಂದಾಜಿಸಿದ್ದಾರೆ.