ಬೆಂಗಳೂರು, ಏ. 18 (DaijiworldNews/TA): ನಟಿ ರಶ್ಮಿಕಾ ಮಂದಣ್ಣ ಸದ್ಯ ವಿದೇಶ ಪ್ರವಾಸದಲ್ಲಿದ್ದು, ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ಇತ್ತೀಚೆಗೆ ವಿವಾಹವಾಗಿರುವ ರಶ್ಮಿಕಾ ಅವರು ಇದೀಗ ಬ್ಯಾಂಕಾಕ್ನಲ್ಲಿ ತಂಗಿದ್ದು, ‘ಮೈಸಾ’ ಎಂಬ ಮಹಿಳಾ ಪ್ರಧಾನ ಸಿನಿಮಾಗಾಗಿ ಆ್ಯಕ್ಷನ್ ತರಬೇತಿ ಪಡೆಯುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳಿದ್ದು, ಅದಕ್ಕಾಗಿ ಅವರು ತೀವ್ರ ಸಿದ್ಧತೆ ನಡೆಸುತ್ತಿದ್ದಾರೆ.

ಶೂಟಿಂಗ್ ಆರಂಭಕ್ಕೂ ಮುನ್ನವೇ ರಶ್ಮಿಕಾ ದಿನಕ್ಕೆ ಸುಮಾರು 8 ಗಂಟೆಗಳ ಕಾಲ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ವಿಶೇಷವಾಗಿ ಹ್ಯಾಂಡ್ ಟು ಹ್ಯಾಂಡ್ ಕಾಂಬ್ಯಾಟ್ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದು, ಪಾತ್ರಕ್ಕೆ ತಕ್ಕಂತೆ ತಾವು ತಯಾರಾಗುತ್ತಿದ್ದಾರೆ.
ವಿವಾಹದ ಬಳಿಕ ಹನಿಮೂನ್ಗೆ ಹೋಗುವ ಬದಲು, ತಮ್ಮ ವೃತ್ತಿಗೆ ಆದ್ಯತೆ ನೀಡಿರುವ ರಶ್ಮಿಕಾ ಅವರ ಪರಿಶ್ರಮ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ‘ಮೈಸಾ’ ಚಿತ್ರದ ಮೂಲಕ ಅವರು ಮತ್ತೊಮ್ಮೆ ತಮ್ಮ ವಿಭಿನ್ನ ಪಾತ್ರದೊಂದಿಗೆ ಸಿನಿರಂಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.