ಮುಂಬೈ,ಏ. 14 (DaijiworldNews/AK): ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಆಲಿಯಾ ಭಟ್ ಬಾಲಿವುಡ್ನ ಸೂಪರ್ ಸ್ಟಾರ್ ನಟಿ. ಹಿಂದಿ ಚಿತ್ರರಂಗದ ಸ್ಟಾರ್ ನಟಿ ಆಗಿರುವ ಆಲಿಯಾ ಭಟ್, ಬಾಲಿವುಡ್ನ ಬಲು ದುಬಾರಿ ನಟಿ . ಹಿಂದಿ ಮಾತ್ರವಲ್ಲದೆ, ತೆಲುಗಿನ ‘ಆರ್ಆರ್ಆರ್’ ಸಿನಿಮಾನಲ್ಲಿಯೂ ಆಲಿಯಾ ಭಟ್ ನಟಿಸಿದ್ದು, ಆ ಸಿನಿಮಾ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ.

ಇದೀಗ ಹಲವು ವರ್ಷಗಳ ಬಳಿಕ ಆಲಿಯಾ ಭಟ್ ಮತ್ತೊಮ್ಮೆ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ. ಅಂದಹಾಗೆ ಈ ಬಾರಿಯೂ ಅತಿಥಿ ಪಾತ್ರದಲ್ಲೇ. ಈ ಹಿಂದೆ ‘RRR’ ಚಿತ್ರದಲ್ಲಿ ‘ಸೀತಾ’ ಪಾತ್ರದ ಮೂಲಕ ದಕ್ಷಿಣ ಭಾರತದ ಪ್ರೇಕ್ಷಕರ ಮನ ಗೆದ್ದಿದ್ದ ಆಲಿಯಾ ಭಟ್, ಈಗ ಮತ್ತೊಂದು ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಚಿತ್ರದ ಭಾಗವಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜೂನಿಯರ್ ಎನ್ಟಿಆರ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸದ್ಯ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.