ತಿರುವನಂತಪುರ, ಏ. 01 (DaijiworldNews/AA): ಸಿನಿಮಾ ಸೆಟ್ನಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಮೇಲೆ ಮಲಯಾಳಂ ನಿರ್ದೇಶಕ, ನಟ ರಂಜಿತ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಿನಿಮಾ ಸಮಯದಲ್ಲಿ ರಂಜಿತ್ ತಮ್ಮನ್ನು ಕ್ಯಾರವಾನ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ನಿರ್ದೇಶಕರ ವಿರುದ್ಧ ಸೋಮವಾರ ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿಯ ದೂರಿನ ಮೇರೆಗೆ ಪೊಲೀಸರು ರಂಜಿತ್ ಅವರನ್ನು ಮಂಗಳವಾರ ತಡರಾತ್ರಿ ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ಬಂಧಿಸಿದಿದ್ದಾರೆ.
ಬಂಧನದ ಬಳಿಕ ಅವರನ್ನು ಕೇರಳದ ಜೆಎಫ್ಎಂಸಿ (ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್) ಕೋರ್ಟ್ಗೆ ಹಾಜರುಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಳಿಕ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದೆ.