ಮುಂಬೈ, ಮಾ. 31 (DaijiworldNews/AA): ತಂದೆ ರೀತಿಯೇ ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ ಪುತ್ರ ಹೃದಾನ್ ರೋಷನ್ ಅವರು ಅಮೆರಿಕದಲ್ಲಿ ಸಿನಿಮಾ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ಕಿರಿಯ ಪುತ್ರ ಹೃದಾನ್ ರೋಷನ್ ಅವರು, ಸಿನಿಮಾ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮೇಕಿಂಗ್ ಕಲಿಯುತ್ತಿದ್ದಾರೆ. ಶಿಕ್ಷಣ ಮುಗಿಸಿದ ಬಳಿಕ ಅವರು ಕೂಡ ತಂದೆ ಹೃತಿಕ್ ರೋಷನ್ ರೀತಿಯೇ ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ.
ಹೃದಾನ್ ಅವರು ಅಮೆರಿಕದ ಪ್ರಸಿದ್ಧ ಲ ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್ ಕೋರ್ಸ್ಗೆ ದಾಖಲಾಗಿದ್ದಾರೆ. ವಿಚಾರವನ್ನ ಹೃದಾನ್ ಅವರ ಶಾಲೆಯಾದ 'ಅಮೆರಿಕನ್ ಸ್ಕೂಲ್ ಆಫ್ ಬಾಂಬೆ' ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಹೃದಾನ್ಗೆ ಶುಭಾಶಯ ತಿಳಿಸಿದೆ.
'ಹೃದಾನ್ ಯುಎಸ್ಸಿಯಲ್ಲಿ ಸಿನಿಮಾ ಕಲಿಯಲಿದ್ದಾರೆ ಎಂಬುದು ನಮಗೆ ಆಶ್ಚರ್ಯವೇನಲ್ಲ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ' ಎಂದು ಶಾಲೆಯು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.