ಮುಂಬೈ, ಮಾ. 30 (DaijiworldNews/AA): ಬಾಲಿವುಡ್ ನಟಿ ಸೋನಂ ಕಪೂರ್ ಎರಡನೇ ಬಾರಿಗೆ ತಾಯಿಯಾಗಿದ್ದು, ಅವರು ಮಾರ್ಚ್ 29ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, "ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ ಸಂತಸ ಹೆಚ್ಚಿದೆ. ವಾಯು ತನ್ನ ಚಿಕ್ಕ ಸಹೋದರನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ. ನಮ್ಮ ಮನೆಯ ಸಂತೋಷ ಹೆಚ್ಚಿದೆ. ಈಗ ಕುಟುಂಬ ನಾಲ್ಕು ಜನರಿಗೆ ಬಡ್ತಿ ಪಡೆದಿದೆ. ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಾವು ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ, ಸೋನಮ್, ಆನಂದ್ ಮತ್ತು ವಾಯು" ಎಂದು ಸೋನಂ ತಿಳಿಸಿದ್ದಾರೆ.
ಇನ್ನು ಸೋನಂ ಕಪೂರ್ ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. 'ಸೋನಾ ಹಾಗೂ ಆನಂದ್ಗೆ ಅಭಿನಂದನೆ' ಎಂದು ನಟಿ ಕರೀನಾ ಕಪೂರ್ ಕಮೆಂಟ್ ಮಾಡಿದ್ದು, ಹುಮಾ ಖುರೇಷಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರ್ಟ್ ಎಮೋಜಿ ಕಮೆಂಟ್ ಮಾಡಿದ್ದಾರೆ.