ಮುಂಬೈ,ಮಾ. 28 (DaijiworldNews/AK): ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಎರಡು ವಾರಗಳಲ್ಲೇ ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.

ಸಿನಿಮಾ ನಿರ್ದೇಶನ ಮಾಡಿರುವ ಆದಿತ್ಯ ಧರ್ ಅವರು ಸಿನಿಮಾದ ಮೂವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ‘ಧುರಂಧರ್’ ಸಿನಿಮಾ ಈಗಾಗಲೇ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡುವ ನಿರೀಕ್ಷೆ ಇದೆ. ಇದೀಗ ಸಿನಿಮಾದ ನಾಯಕ ರಣ್ವೀರ್ ಸಿಂಗ್ ಅವರಿಗೆ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ಭರ್ಜರಿ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾಗಳು ಯಶಸ್ವಿಯಾದರೆ ಮುಖ್ಯ ನಟರಿಗೆ, ತಂತ್ರಜ್ಞರಿಗೆ ಐಶಾರಾಮಿ ಕಾರುಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಶುರುವಾಗಿದೆ. ಇದೀಗ ಆದಿತ್ಯ ಧರ್ ಅವರೂ ಸಹ ರಣ್ವೀರ್ ಸಿಂಗ್ಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಐದು ಕೋಟಿಗೂ ಹೆಚ್ಚು ಮೌಲ್ಯದ ಐಶಾರಾಮಿ ಜಿಎಂಸಿ ಹಮ್ಮರ್ ಇವಿ ಕಾರನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಶ್ವದ ರಗಡ್ ಮತ್ತು ಐಶಾರಾಮಿ ಕಾರುಗಳಲ್ಲಿ ಒಂದಾಗಿರುವ ಹಮ್ಮರ್ ಕಾರಿನ ಅತ್ಯಾಧುನಿಕ ವರ್ಷನ್ ಕಾರು ಇದಾಗಿದೆ. ವಿಶೇಷವೆಂದರೆ ಈ ಕಾರು ಎಲೆಕ್ಟ್ರಾನಿಕ್ ಕಾರಾಗಿದೆ.