ಬೆಂಗಳೂರು, ಮಾ. 25 (DaijiworldNews/AA): 'ಲವ್ ಮಾಕ್ಟೇಲ್ 3' ಸಿನಿಮಾದ ಕಥೆ ಬಗ್ಗೆ ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಅವರು ತಗಾದೆ ಎತ್ತಿದ್ದು, ಕೃತಿಚೌರ್ಯ ಆಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪಕ್ಕೆ 'ಲವ್ ಮಾಕ್ಟೇಲ್ 3' ಸಿನಿಮಾದ ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಅವರು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ನಟ ಡಾರ್ಲಿಂಗ್ ಕೃಷ್ಣ, 'ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಂದಿದೆ. ಒಬ್ಬ ಫಿಲ್ಮ್ ಮೇಕರ್ಗೆ ಇದಕ್ಕಿಂತ ಬೇರೆ ಅವಮಾನ ಇಲ್ಲ. ನಮ್ಮ ಮರ್ಯಾದೆ ಹೋಗಿದೆ. ಅದಕ್ಕಾಗಿ ನಾನು ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಮೇಲೆ ಕಾನೂನು ಹೋರಾಟ ಮಾಡುತ್ತೇನೆ. ನಾನು ರಾಜಿ ಆಗಲ್ಲ. ಇಂಥವರಿಗೆ ಈ ರೀತಿಯೇ ಉತ್ತರ ನೀಡಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಲವ್ ಮಾಕ್ಟೆಲ್ 3' ಸಿನಿಮಾದ ಕತೆಯನ್ನು ಕದಿಯಲಾಗಿದೆ. ನಾವು ಕೆಲ ವರ್ಷಗಳ ಹಿಂದೆ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ ಕತೆಯನ್ನು ಕದ್ದು ಅವರು ಸಿನಿಮಾ ಮಾಡಿದ್ದಾರೆ ಎಂದು ನಿರ್ದೇಶಕ ಗುರು ದೇಶಪಾಂಡೆ ಮತ್ತು ಕತೆಗಾರ ರಾಘವೇಂದ್ರ ನಾಯಕ್ ಅವರು ಆರೋಪಿಸಿದ್ದಾರೆ.