ಬೆಂಗಳೂರು,ಮಾ. 01 (DaijiworldNews/AK): ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಅನೇಕ ಗಣ್ಯರು ಆಗಮಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರತಕ್ಷತೆ ಕಾರ್ಯಕ್ರಮಕ್ಕೆ ಅಗಮಿಸಿ ಹೊಸ ಜೋಡಿಗೆ ಶುಭಕೋರಿದರು. ಬಹಳ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲಾಗಿದೆ. ಡಿಕೆ ಸುರೇಶ್, ಆರ್. ಅಶೋಕ ಮುಂತಾದ ಗಣ್ಯರು ಆರಕ್ಷತೆಗೆ ಬಂದು ಶುಭ ಕೋರಿದ್ದಾರೆ.
ದುಷ್ಯಂತ್ ಅವರು ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪುತ್ರ. ಹಾಗಾಗಿ ರಾಜಕೀಯ ಕ್ಷೇತ್ರದ ಹಲವರು ಈ ಮದುವೆಗೆ ಹಾಜರಿ ಹಾಕಿದ್ದಾರೆ. ಫೋಟೋಗಳು ವೈರಲ್ ಆಗಿವೆ.
‘ಗತ ವೈಭವ’ ಸಿನಿಮಾದ ಮೂಲಕ ದುಷ್ಯಂತ್ ಅವರು ಗುರುತಿಸಿಕೊಂಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಆ ಸಿನಿಮಾ 2025ರಲ್ಲಿ ಬಿಡುಗಡೆ ಆಗಿತ್ತು. ಬಳಿಕ ಒಟಿಟಿಯಲ್ಲೂ ಮೆಚ್ಚುಗೆ ಪಡೆಯಿತು.