ಮುಂಬೈ, , ಫೆ. 14 (DaijiworldNews/AK): ಮೃಣಾಲ್ ಠಾಕೂರ್ ಹಾಗೂ ಧನುಶ್ ಮದುವೆ ಆಗುತ್ತಾರೆ ಎಂಬ ಸುದ್ದಿ ಜೋರಾಗಿತ್ತು. ಇಂದೇ (ಫೆಬ್ರವರಿ 14) ಇವರ ವಿವಾಹ ನಡೆಯಲಿದೆ ಎಂದು ವರದಿ ಆಗಿತ್ತು. ಆದರೆ, ಇದನ್ನು ಇವರು ಒಪ್ಪಿಕೊಂಡಿರಲಿಲ್ಲ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ವದಂತಿ ಹಬ್ಬಲು ಮುಖ್ಯ ಕಾರಣ ಆಗಿತ್ತು. ಈ ವಿಷಯವಾಗಿ ಮೃಣಾಲ್ ಕಡೆಯಿಂದ ಈಗ ಸ್ಪಷ್ಟನೆ ಸಿಕ್ಕಿದೆ.

‘ಗಲಾಟಾ ಇಂಡಿಯಾ’ಗೆ ಮೃಣಾಲ್ ಸಂದರ್ಶನ ನೀಡಿದ್ದಾರೆ. ಈ ವೇಳೆ ‘ಫೆಬ್ರವರಿ 14ರಂದು ನಿಮ್ಮ ಮದುವೆ ಎಂಬ ಸುದ್ದಿ ಹರಿದಾಡಿದೆಯಲ್ಲ ಎಂದು ಕೇಳಲಾಯಿತು. ಅದಕ್ಕೆ ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಅಲ್ಲ. ನನ್ನ ಮದುವೆ ನಡೆಯೋದು ಏಪ್ರಿಲ್ 1ರಂದು. ಏಕೆಂದರೆ ಅದು ಮೂರ್ಖರ ದಿನ’ ಎಂದು ಅವರು ಉತ್ತರಿಸಿದ್ದಾರೆ.
ಬಳಿಕ ಅವರು ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಸರಿಯಾದ ದಿನ, ಸರಿಯಾದ ಸಮಯ ಮತ್ತು ಸರಿಯಾದ ವ್ಯಕ್ತಿ ನನ್ನ ಜೀವನದಲ್ಲಿ ಬಂದಾಗ, ನನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅದನ್ನು ಮೊದಲು ಹೇಳುವವಳು ನಾನೇ’ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 20ರಂದು ಮೃಣಾಲ್ ಠಾಕೂರ್ ನಟನೆಯ ‘ದೋ ದೀವಾನೆ ಶೆಹೆರ್ ಮೇ’ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಸಿದ್ಧಾಂತ ಚತುರ್ವೇದಿ ಹೀರೋ. ಸಿನಿಮಾ ರಿಲೀಸ್ ಇಟ್ಟುಕೊಂಡು ಯಾರೂ ವಿವಾಹ ಆಗೋ ಪ್ಲ್ಯಾನ್ ಮಾಡೋದಿಲ್ಲ ಎಂದು ಹೇಳಿದ್ದಾರೆ.