ಹೈದರಾಬಾದ್, ಫೆ. 13 (DaijiworldNews/AA): ಇತ್ತೀಚೆಗಷ್ಟೇ ನಟ ರಾಮ್ ಚರಣ್ ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಅವಳಿ ಮಕ್ಕಳಿಗೆ ಭಿನ್ನ ಹೆಸರನ್ನ ಆಯ್ಕೆ ಮಾಡಿಕೊಂಡಿದ್ದು, ಮಕ್ಕಳಿಗೆ ದೇವರ ಹೆಸರನ್ನ ಇಟ್ಟಿದ್ದಾರೆ.

ರಾಮ್ ಚರಣ್ ಅವರು ಅವಳಿ ಮಕ್ಕಳಿಗೆ ಹೆಸರನ್ನು ಇಡಲು ಖ್ಯಾತ ಜ್ಯೋತಿಷಿ ಬಳಿ ತೆರಳಿದ್ದರು. ಮಕ್ಕಳಿಗೆ ಯಾವ ರೀತಿಯ ಹೆಸರು ಇಡಬೇಕು ಎಂಬ ಬಗ್ಗೆ ಮಾಹಿತಿ ಕೇಳಲಾಗಿತ್ತು. ಅವರು ಸೂಚಿಸಿದ ಹೆಸರನ್ನೇ ಇವರು ಮಕ್ಕಳಿಗೆ ಇಟ್ಟಿದ್ದಾರೆ ಎನ್ನಲಾಗಿದೆ.
ನಟ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮಗನಿಗೆ ಶಿವರಾಮ್ ಎಂದು ನಾಮಕರಣ ಮಾಡಿದ್ದಾರೆ. ಶಿವರಾಮ್ ಎಂಬುದು ಹಿಂದೂ ದೇವರುಗಳಾದ ಶಿವ ಹಾಗೂ ರಾಮನ ಸಮ್ಮಿಲನವಾಗಿದೆ. ಕೊನಿಡೆಲಾ ಶಿವರಾಮ್ ಎಂದು ಮಗನಿಗೆ ಕರೆಯಲಾಗುತ್ತದೆ. ಇನ್ನು, ಮಗಳಿಗೆ ಅನ್ವೀರಾ ದೇವಿ ಎಂದು ಇಡಲಾಗಿದೆಯಂತೆ. ಇದು ಪ್ರಾಚೀನ ಪರಿಭಾಷೆಯಲ್ಲಿ ಧೈರ್ಯ ಮತ್ತು ಕೃಪೆಯ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ.