ಮುಂಬೈ, ಫೆ. 12 (DaijiworldNews/AA): ಬಾಲಿವುಡ್ ನಟ ಸೈಫ್ ಅಲಿ ಖಾನ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ವೆಲ್ವೆಟ್ ಸೂಟ್ ಧರಿಸಿದ್ದರು. ಈ ವೇಳೆ ಅವರು ಸೂಟ್ ಮೇಲೆ ಧರಿಸಿದ್ದ ನವಿಲಿನ ಆಕಾರದ ಪುಟ್ಟ ಬ್ರೂಚ್ ಎಲ್ಲರ ಗಮನ ಸೆಳೆದಿತ್ತು.

ಸೈಫ್ ಅಲಿ ಖಾನ್ ಧರಿಸಿರುವ ಈ ರಾಯಲ್ ಬ್ರೂಚ್ನ ಬೆಲೆ ಸುಮಾರು 42 ಲಕ್ಷ ರೂಪಾಯಿಗಳು. ಈ ಬ್ರೂಚ್ ಬೆಲೆಗೆ ಒಂದು ಮನೆ ನಿರ್ಮಾಣ ಮಾಡಬಹುದಾಗಿದೆ. ಇದೀಗ ಈ ಬ್ರೂಚ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬ್ರೂಚ್ ವಜ್ರ ಮತ್ತು ಅತ್ಯಂತ ಅಮೂಲ್ಯವಾದ ಹರಳುಗಳನ್ನು ಒಳಗೊಂಡಿದೆ. ಸೈಫ್ ಅಲಿ ಖಾನ್ ಅವರ ಈ ಬ್ರೂಚ್ ಅನ್ನು ಪ್ರಸಿದ್ಧ ಐಷಾರಾಮಿ ಆಭರಣ ವಿನ್ಯಾಸಕ ಸಂಸ್ಥೆಯು ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದೆ.