ಮುಂಬೈ, ಜ. 16 (DaijiworldNews/AA): ಬರೋಬ್ಬರಿ 20 ವರ್ಷಗಳ ಬಳಿಕ ವಿಚ್ಛೇದನ ಪಡೆದ ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಒಬ್ಬರಾದ ಧನುಶ್ ಅವರು ಇದೀಗ ಸ್ಟಾರ್ ನಟಿಯೊಬ್ಬರ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಧನುಶ್ ಅವರು ರಜನೀಕಾಂತ್ ಪುತ್ರಿ ಐಶ್ವರ್ಯ ಜೊತೆಗೆ 2004 ರಲ್ಲಿ ಮದುವೆಯಾಗಿದ್ದರು. ಇವಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ತಾವು ಬೇರೆ ಆಗುತ್ತಿರುವುದಾಗಿ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಘೋಷಿಸಿದರು. 2024ರಲ್ಲಿ ಇವರಿಬ್ಬರಿಗೆ ನ್ಯಾಯಾಲಯವು ವಿಚ್ಛೇದನ ನೀಡಿತು. ಇದೀಗ ಧನುಶ್ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಅವರು ಪರಸ್ಪರ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃಣಾಲ್ ಠಾಕೂರ್ ಮತ್ತು ಧನುಶ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಮೃಣಾಲ್ ನಟಿಸಿದ್ದ 'ಸನ್ ಆಫ್ ಸರ್ದಾರ್ 2' ಪ್ರೀಮಿಯರ್ ಶೋನಲ್ಲಿ ಧನುಶ್ ಭಾಗವಹಿಸಿದ್ದರು. ಧನುಶ್ ನಟಿಸಿದ್ದ ಹಿಂದಿ ಸಿನಿಮಾ 'ತೇರೆ ಇಷ್ಕ್ ಮೇ' ರ್ಯಾಪ್ ಅಪ್ ಪಾರ್ಟಿಯಲ್ಲಿ ಮೃಣಾಲ್ ಭಾಗವಹಿಸಿದ್ದರು. ಈ ವೇಳೆ ಇವರಿಬ್ಬರ ಪ್ರೀತಿಯ ಬಗ್ಗೆ ವದಂತಿಗಳು ಹರಿದಾಡಿದ್ದವು.
ಮೃಣಾಲ್ ಠಾಕೂರ್ ಮತ್ತು ಧನುಶ್ ಮದುವೆ ಆಗಲಿದ್ದಾರಂತೆ. ಈ ಇಬ್ಬರ ವಿವಾಹ ಫೆಬ್ರವರಿ 14 ರಂದು ನಡೆಯಲಿದೆ. ಈ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರ ಭಾಗಿ ಆಗಲಿದ್ದಾರೆ ಎಂಬ ಸುದ್ದು ಹರಿದಾಡುತ್ತಿದೆ.