ನವದೆಹಲಿ, ಡಿ. 30 (DaijiworldNews/AA): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ ಯುದ್ಧ ಆಧಾರಿತ ಸಿನಿಮಾ ಬ್ಯಾಟಲ್ ಆಫ್ ಗಲ್ವಾನ್ ಟೀಸರ್ಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಿನಿಮಾದಲ್ಲಿ ಚಿತ್ರೀಕರಿಸಿರುವ ದೃಶ್ಯಗಳು ಜೂನ್ 2020 ರ ಘರ್ಷಣೆಯ ಘಟನೆಗಳು ಸತ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಗಲ್ವಾನ್ ಕಣಿವೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನ ಚೀನಾ ಭಾಗದಲ್ಲಿದೆ. ಘರ್ಷಣೆಗೆ ಭಾರತೀಯ ಸೈನಿಕರು ಎಲ್ಎಸಿ ದಾಟಿ, ಪ್ರಚೋದಿಸಿದ್ದೇ ಕಾರಣ ಎಂದು ಚೀನಾ ದೂಷಿಸಿದೆ.
ಚೀನಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಅದು ಕಲಾವಿದನ ಸ್ವಾತಂತ್ರ್ಯ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಿನಿಮಾ ತಯಾರಕರು ತಮ್ಮ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಚಿತ್ರ ನಿರ್ಮಿಸಲು ಸ್ವತಂತ್ರರು ಎಂದು ತಿಳಿಸಿದೆ.
ಈ ಸಿನಿಮಾದಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆದಾಗ್ಯೂ, ಯಾರಿಗೇ ಆಕ್ಷೇಪಣೆ ಇದ್ದರೂ ಸರ್ಕಾರವನ್ನು ಸಂಪರ್ಕಿಸಬಹುದು. ನಾವು ಅಗತ್ಯ ವಿವರಣೆ, ಸ್ಪಷ್ಟನೆ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಗಲ್ವಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ 16ನೇ ಬಿಹಾರ್ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಳ್ಳ ಸಂತೋಷ್ ಬಾಬು ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರವು 2026ರ ಏಪ್ರಿಲ್ 17ರಂದು ಬಿಡುಗಡೆಯಾಗಲಿದೆ.