ನವದೆಹಲಿ, ಡಿ. 29 (DaijiworldNews/AA): ತೆಲುಗು ನಟ ಅಲ್ಲು ಸಿರೀಶ್ ಸೋಮವಾರ ತಮ್ಮ ಗೆಳತಿ ನಯನಿಕಾ ಅವರೊಂದಿಗೆ ಮುಂದಿನ ವರ್ಷ ಮಾರ್ಚ್ನಲ್ಲಿ ಸಪ್ತಪದಿ ತುಳಿಯುವುದಾಗಿ ತಿಳಿಸಿದ್ದಾರೆ.

ತೆಲುಗು ಸೂಪರ್ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಮತ್ತು ಪ್ರಮುಖ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಸಿರೀಶ್ ಅವರು, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ತಮ್ಮ ಮದುವೆಯ ದಿನಾಂಕವನ್ನು ಘೋಷಿಸಿದ್ದಾರೆ.
2026ರ ಮಾರ್ಚ್ 6 ರಂದು ನಯನಿಕಾ ಅವರೊಂದಿಗೆ ನಟ ಅಲ್ಲು ಸಿರೀಶ್ ಅವರು ಹಸೆಮಣೆ ಏರಲಿದ್ದಾರೆ. ಇನ್ನು ಅವರ ಸಹೋದರ ಅಲ್ಲು ಅರ್ಜುನ್ ಅವರ ವಿವಾಹ ಕೂಡ ಅದೇ ದಿನ ನಡೆದಿತ್ತು ಎಂಬುದು ವಿಶೇಷ.