ಕಡಬ, ,ನ. 15 (DaijiworldNews/AK): ದಕ್ಷಿಣದ ಹೆಸರಾಂತ ನಟಿ ನಯನತಾರಾ ತಮ್ಮ ಪತಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಈ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್, ಶಿಲ್ಪಾ ಶೆಟ್ಟಿ ಇನ್ನೂ ಹಲವಾರು ಸೆಲೆಬ್ರಿಟಿಗಳು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ. ಇದೀಗ ನಯನ ತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದ ಮುಂಭಾಗ ಪತಿ ವಿಘ್ನೇಶ್ ಜೊತೆಗೆ ತೆಗೆಸಿದ ಫೋಟೋವೊಂದನ್ನ ನಯನತಾರಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಯನತಾರಾ ನಿರ್ಮಾಣದ ಹಾಗೂ ವಿಘ್ನೇಶ್ ನಿರ್ದೇಶದ ಲವ್ ಇನ್ಶುರೆನ್ಸ್ ಕೊಂಪನಿ (LiK) ಚಿತ್ರವು ಮುಂದಿನ ಡಿಸೆಂಬರ್ 18ರಂದು ತೆರೆಗೆ ಬರಲಿದೆ. ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ತಾರಾಗಣದಲ್ಲಿದ್ದಾರೆ. ಅಕ್ಟೋಬರ್ 17ರಂದೇ ಈ ಚಿತ್ರ ತೆರೆಗೆ ಬರಲು ಸಜ್ಜಾಗಿತ್ತು, ಆದ್ರೆ ʻಡ್ಯೂಡ್ʼ ಸಿನಿಮಾ ರಿಲೀಸ್ನಿಂದಾಗಿ ದಿನಾಂಕವನ್ನ ಡಿ.18ಕ್ಕೆ ಮುಂದೂಡಲಾಯಿತು.