ಬೆಂಗಳೂರು, ಅ. 31(DaijiworldNews/TA): ಸ್ಯಾಂಡಲ್ವುಡ್ನಲ್ಲಿ ವೃತ್ತಿ ಜೀವನ ಆರಂಭಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಹೆಸರು ಮಾಡಿದ್ದು, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ದೃಷ್ಟಿಯಲ್ಲಿ ರಶ್ಮಿಕಾ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಆಗಿದೆ. ಆದರೆ, ನಕಿರಿಕ್ ಪಾರ್ಟಿ ಅವರ ಫಸ್ಟ್ ಸಿನಿಮಾ ಅಲ್ಲ ಎಂಬುವುದಾಗಿ ಟಿ ಸ್ವತಃ ಒಪ್ಪಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿರುವಂತೆ, ಅವರ ಮೊದಲ ಸಿನಿಮಾ ಅವಕಾಶ ಗೆಳೆಯರೇ ಗೆಳತಿಯರೇ ಎಂಬ ಸಿನಿಮಾಕ್ಕೆ ಸಿಕ್ಕಿತ್ತು. ಚಿತ್ರಕ್ಕೆ ನಾಲ್ಕೈದು ತಿಂಗಳು ತಯಾರಿ, ರಿಹರ್ಸಲ್ ನಡೆದಿತ್ತು, ಆದರೆ ಶೂಟಿಂಗ್ ಆರಂಭವಾಗುವ ಮೊದಲು ಸಿನಿಮಾ ಬಂದ್ ಆಗಿತ್ತು. ಆದ್ದರಿಂದ, ಅವರ ವೃತ್ತಿ ಆರಂಭದಲ್ಲಿ ಸಿಕ್ಕ ಮೊದಲ ಸಿನಿಮಾದ ಅನುಭವವು ಕಿರಿಕ್ ಪಾರ್ಟಿ ಅಲ್ಲ ಎಂದು ಹೇಳಲಾಗಿದೆ.
ಕಿರಿಕ್ ಪಾರ್ಟಿಯಲ್ಲಿ ನಟನೆಯ ಅನುಭವ ರಶ್ಮಿಕಾಗೆ ಪ್ರೋತ್ಸಾಹ ನೀಡಿದೆ. ಪ್ರೀಮಿಯರ್ ಶೋ ದಿನ, ಆಡಿಟೋರಿಯಂನಲ್ಲಿ ಪ್ರೇಕ್ಷಕರು ಅವರ ಕ್ಯಾರೆಕ್ಟರ್ "ಸಾನ್ವಿ ಜೋಸೆಫ್"ನ್ನು ಕೂಗುತ್ತಿದ್ದರು. ಈ ಕ್ಷಣ ಅವರು ಇನ್ನಷ್ಟು ಸಿನಿಮಾ ಮಾಡಲು ಪ್ರೋತ್ಸಾಹ ನೀಡಿತು. ರಶ್ಮಿಕಾ ಪ್ರಕಾರ “ಇನ್ನಷ್ಟು ಬೇಕು, ಇದು ಸಾಕಾಗೋದಿಲ್ಲ, ಇನ್ನಷ್ಟು ಬೇಕು” ಎಂಬ ಅಭಿಯಾನ ಮನಸ್ಥಿತಿಯೇ ಅವರನ್ನು ಸದ್ಯದ ಯಶಸ್ಸಿಗೆ ಕಾರಣವಾಗಿದೆ.
ರಶ್ಮಿಕಾ ಮಾತಿಗೆ ಜನರು ವಿವಿಧ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಗೆಳೆಯರೇ ಗೆಳತಿಯರೇ ಶೂಟಿಂಗ್ ಆಗದಿದ್ದ ಕಾರಣ ಅದನ್ನು ಫಸ್ಟ್ ಸಿನಿಮಾ ಎಂದು ಭಾವಿಸುವುದಿಲ್ಲವೆಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ರಶ್ಮಿಕಾ ತಮ್ಮ ಅನುಭವ ಮತ್ತು ದೃಷ್ಟಿಕೋನವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಇದು ಸದ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.