ಬೆಂಗಳೂರು, ಸೆ. 14 (DaijiworldNews/AA): ಸ್ಯಾಂಡಲ್ವುಡ್ ನಟಿ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಪೀಕಬೂ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ.

ಮಂಜು ಸ್ವರಾಜ್ ನಿರ್ದೇಶನದ ಪೀಕಬೂ ಚಿತ್ರದಲ್ಲಿ ಅಮೂಲ್ಯ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ನಟಿ ಅಮೂಲ್ಯ ಅವರಿಗೆ ಸೆ.14ರಂದು ಹುಟ್ಟುಹಬ್ಬದ ಸಂಭ್ರಮ. ಈ ವೇಳೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಆಗಿದೆ.
ಮಂಜು ಸ್ವರಾಜ್ ಅವರು ನಟಿ ಅಮೂಲ್ಯಗೆ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 'ಗೋಲ್ಡನ್ ಸ್ಟಾರ್' ಗಣೇಶ ಮತ್ತು ಅಮೂಲ್ಯ ನಟನೆಯ ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಹಿಟ್ ಆಗಿತ್ತು.
ಸದ್ಯಕ್ಕೆ ಈ ಚಿತ್ರದ ತಾಂತ್ರಿಕ ವರ್ಗ ಅಂತಿಮವಾಗಿದ್ದು, ಕಲಾವಿದರು ಇನ್ನ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಸುರೇಶ್ ಬಾಬು ಬಿ ಚಿತ್ರದ ಛಾಯಾಗ್ರಾಹಕರಾದರೆ, ವೀರ್ ಸಮರ್ಥ್ ಮತ್ತು ಶ್ರೀಧರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸದ್ಯ ಅಮೂಲ್ಯ ಅವರ ಹುಟ್ಟು ಹಬ್ಬದ ಹಿನ್ನೆಲೆ ಟೈಟಲ್ ಟೀಸರ್ ಬಿಡುಗಡೆಯಾಗಿದೆ.