ಬೆಂಗಳೂರು, ಆ. 30 (DaijiworldNews/AA): ನಟಿ ರುಕ್ಮಿಣಿ ವಸಂತ್ ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಅವರು ತಮ್ಮ ಗಾಯನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಕುರಿತಾದ ಪೋಸ್ಟ್ ಒಂದು ವೈರಲ್ ಆಗಿದ್ದು, ಇದರಲ್ಲಿ ರುಕ್ಮಿಣಿ ಅವರು ಸುಮಧುರವಾಗಿ ಹಾಡಿದ್ದಾರೆ. ಇದರೊಂದಿಗೆ ಅವರು ಒಳ್ಳೆಯ ಸಿಂಗರ್ ಅನ್ನೋ ವಿಚಾರ ತಿಳಿದುಬಂದಿದೆ.
ರುಕ್ಮಿಣಿ ವಸಂತ್ ಅವರು 'ಮದರಾಸಿ' ಹೆಸರಿನ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಮಾಲತಿ ಹೆಸರಿನ ಪಾತ್ರ. ಈ ಚಿತ್ರಕ್ಕೆ ಶಿವಕಾರ್ತಿಕೇಯ ಹೀರೋ. ಶಿವಕಾರ್ತಿಕೇಯ ಅವರು ಈಗಾಗಲೇ ಕಾಲಿವುಡ್ನಲ್ಲಿ ಸಾಕಷ್ಟು ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಜೊತೆ ನಟಿಸೋ ಅವಕಾಶ ರುಕ್ಮಿಣಿಗೆ ಸಿಕ್ಕಿದೆ. ಇದಕ್ಕಾಗಿ ರುಕ್ಮಿಣಿ ವಿವಿಧ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಹಾಡುಗಳನ್ನು ಕೂಡ ಹಾಡುತ್ತಿದ್ದಾರೆ.
ರುಕ್ಮಿಣಿ ವಸಂತ್ ಅವರು 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ 'ಕಡಲನು..' ಹಾಡು ಸಾಕಷ್ಟು ಗಮನ ಸೆಳೆದಿತ್ತು. ಈ ಹಾಡನ್ನು ರುಕ್ಮಿಣಿ ಹಾಡಿದ್ದಾರೆ. ಈ ಹಾಡು ಸದ್ಯ ಎಲ್ಲರ ಗಮನ ಸೆಳೆದಿದೆ. 'ರುಕ್ಮಿಣಿ ಧ್ವನಿ ಇಷ್ಟು ಮಧರುವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ' ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.