ಮುಂಬೈ, ಜು. 18(DaijiworldNews/ AK):ನಟಿ ಪ್ರಿಯಾಂಕಾ ಚೋಪ್ರಾ ಅವರು ಇಂದು (ಜುಲೈ 18) 43ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರು ಅದ್ದೂರಿಯಾಗಿ ತಮ್ಮ ಬರ್ತ್ಡೇನ ಆಚರಿಸಿಕೊಳ್ಳುತ್ತಿದ್ದಾರೆ.

ಪತಿ ನಿಕ್ ಜೋನಸ್, ಮಗಳು ಮಾಲ್ತಿ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡವರು. ಆ ಬಳಿಕ ಬಾಲಿವುಡ್ನಲ್ಲಿ ಮಿಂಚಿದರು. ಹಲವು ವರ್ಷಗಳ ಕಾಲ ಈ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಅವರು ನಂತರ ಹಾರಿದ್ದು ಹಾಲಿವುಡ್ಗೆ. ಪ್ರಿಯಾಂಕಾ ಅವರು ಇಂಗ್ಲಿಷ್ ಗಾಯಕ ನಿಕ್ ಜೋನಸ್ನ ವಿವಾಹ ಆದ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ.
ಪತಿ ನಿಕ್ ಜೋನಸ್ ಹಾಗೂ ಮಾಲ್ತಿ ಜೊತೆ ಸೇರಿ ಐಲ್ಯಾಂಡ್ ಒಂದಕ್ಕೆ ತೆರಳಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ಬೆಂಬಲವಾಗಿ ನಿಂತ ಕುಟುಂಬಕ್ಕೆ ಹಾಗೂ ಫ್ಯಾನ್ಸ್ಗೆ ಅವರು ಧನ್ಯವಾದ ತಿಳಿಸಿದ್ದಾರೆ. 43ನೇ ವಯಸ್ಸಿಗೆ ಕಾಲಿಟ್ಟ ಬಗ್ಗೆ ಅವರಿಗೆ ಖುಷಿ ವ್ಯಕ್ತಪಡಿಸಿದ್ದಾರೆ.