ಮುಂಬೈ, ಜೂ. 30 (DaijiworldNews/AK): ಬಾಲಿವುಡ್ ಸ್ಟೈಲ್ ಐಕಾನ್ ಕರೀನಾ ಕಪೂರ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರ್ಣಗೊಳಿಸಿದ್ದಾರೆ. ಈಗಲೂ ಸಿನಿಮಾದಲ್ಲಿ ಸಕ್ರಿಯವಾಗಿರುವ ಕರೀನಾ ಕಪೂರ್ ಸಿನಿಮಾ ಹಿನ್ನೆಲೆಯ ಕುಟುಂಬದಿಂದಲೇ ಬಂದಿದ್ದರೂ. ಸಿನಿಮಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಮೂಲಕ ಸಿಲ್ವರ್ ಜುಬ್ಲಿಗೆ ಪಾದಾರ್ಪಣೆ ಮಾಡಿದ್ದಕ್ಕೆ ಕರೀನಾ ಖುಷಿಯಿಂದ ಮೊದಲ ಚಿತ್ರದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಕರೀನಾ ಅಭಿನಯದ ಮೊದಲ ಚಿತ್ರ ರಿಲೀಸ್ ಆಗಿದ್ದು 2000ನೇ ಇಸವಿ ಜೂ.30ರಂದು. ಆ ಚಿತ್ರವೇ ರೆಫ್ಯೂಜಿ, ಅಂದಿನ ಫೇಮಸ್ ನಟ ಅಭಿಷೇಕ್ ಬಚ್ಚನ್ ಜೊತೆ ಜೋಡಿಯಾಗಿ ಅಭಿನಯಿಸಿದ್ದರು ಕರೀನಾ ಕಪೂರ್. ಅಭಿನಯಕ್ಕೆ ಪ್ರಾಶಸ್ರ್ಯವಿರುವ ಸರಳ ಲುಕ್ನಲ್ಲಿ ಈ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ಕರೀನಾ ಬಳಿಕ ಅನೇಕ ಪಾತ್ರಗಳಿಗೆ ಜೀವತುಂಬುತ್ತಾ ಬಂದು ಸ್ಟಾರ್ ನಟರೊಂದಿಗೆ ಅಭಿನಯಿಸಿದ ದಶಕದ ಕಾಲ ಬಣ್ಣದ ಜಗತ್ತನ್ನ ಆಳುತ್ತಾರೆ
ಸಿನಿಮಾರಂಗಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಖುಷಿಯಲ್ಲಿ ಕರೀನಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. 25 ವರ್ಷಗಳು.. ಮುಗಿಯದ ಪ್ರಯಾಣ.. ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.