ಬೆಂಗಳೂರು, ಜೂ. 29 (DaijiworldNews/AA): ನಟ ವಿನಯ್ ರಾಜ್ಕುಮಾರ್ ಅವರು ಸದ್ಯ 'ಅಂದೊಂದಿತ್ತು ಕಾಲ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ಶಾಲೆಯ ಹುಡುಗನ ಪಾತ್ರಕ್ಕಾಗಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು.

ಈ ಕುರಿತು ಮಾತನಾಡಿರುವ ಅವರು, 'ಈ ಸಿನಿಮಾದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್ನಲ್ಲಿ ಕಾಣಿಸಿಕೊಳ್ಳುವುದು ಚಾಲೆಂಜಿಂಗ್ ಆಗಿತ್ತು. ಒಂದಷ್ಟು ತೂಕ ಕಡಿಮೆ ಮಾಡಿಕೊಂಡೆ. ಚಿಕ್ಕ ಹುಡುಗನ ಮುಗ್ಧತೆ ತೋರಿಸಬೇಕಿತ್ತು. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟವಾಗಿತ್ತು" ಎಂದಿದ್ದಾರೆ.
"16ನೇ ವಯಸ್ಸು ಅಂದರೆ ತುಂಬಾ ಕಡಿಮೆ. ನಾನು ಹಾಗೆ ಕಾಣಿಸಲ್ಲ ಅಂದುಕೊಂಡಿದ್ದೆ. ಆದರೆ ಆ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಎಲ್ಲರೂ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿನಿಮಾದ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಜ ಜೀವನದಲ್ಲಿ 10ನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್?ಗಳಲ್ಲಿ ನನ್ನ ಪಾತ್ರ ಸಾಗುತ್ತದೆ" ಎಂದು ಹೇಳಿದ್ದಾರೆ.
'ಅಂದೊಂದಿತ್ತು ಕಾಲ' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಅವರು 16 ವರ್ಷ ವಯಸ್ಸಿನ ಹುಡುಗನ ರೀತಿ ಕಾಣಲು ದೇಹದ ತೂಕ ಇಳಿಸಿಕೊಂಡಿದ್ದರು.