ಬೆಂಗಳೂರು, ಜೂ. 27(DaijiworldNews/AK) : ‘ಕಾಂತಾರ’ ಚಿತ್ರದ ನಟಿ ಸಪ್ತಮಿ ಗೌಡ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೆಟ್ ಮಾಡುತ್ತಲೇ ಇದ್ದಾರೆ. ಇದೀಗ ರೆಡ್ & ವೈಟ್ ಕಾಂಬಿನೇಷನ್ ಡ್ರೆಸ್ನಲ್ಲಿ ಮಾಡಿಸಿರೋ ಫೋಟೋ ಶೂಟ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಕೆಂಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಸ್ಲೀವ್ಲೆಸ್ ಟಾಪ್ ಧರಿಸಿ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಸಪ್ತಮಿಯ ಮುದ್ದಾದ ನಗುವಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿಯ ಫೋಟೋಗೆ ಏಂಜಲ್, ಸಿಂಗಾರ ಸಿರಿ ಹೀಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
2020ರಲ್ಲಿ ಡಾಲಿ ಧನಂಜಯ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸಪ್ತಮಿ ಹೀರೋಯಿನ್ ಆಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. 2022ರಲ್ಲಿ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾಗೆ ಸಪ್ತಮಿ ಗೌಡ ನಾಯಕಿಯಾಗಿ ಗಮನ ಸೆಳೆದರು. ಬಳಿಕ ಬಾಲಿವುಡ್ನ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಸದ್ಯ ಬಾಲಿವುಡ್ ಬಳಿಕ ಟಾಲಿವುಡ್ನತ್ತ ಮುಖ ಮಾಡಿರುವ ಸಪ್ತಮಿ ತೆಲುಗು ನಟ ನಿತಿನ್ಗೆ ನಾಯಕಿಯಾಗಿ ನಟಿಸಿದ್ದಾರೆ.