ಬೆಂಗಳೂರು, ಜೂ. 26 (DaijiworldNews/AK): ಸಿನಿಮಾ ಲೋಕದಲ್ಲಿ ರಶ್ಮಿಕಾ ಮಂದಣ್ಣ ಹವಾ ಮುಂದುವರೆದಿದೆ. ಇದೀಗ ಅವರ ಮತ್ತೊಂದು ಚಿತ್ರ ಘೋಷಣೆಯಾಗಿದ್ದು ಶೀರ್ಷಿಕೆಯನ್ನು ಗೆಸ್ ಮಾಡುವಂತೆ ಸೂಚಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಸಿನಿಮಾ ಪಟ್ಟಿಗೆ ಈಗ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದ್ದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಯಾವ ಪ್ರಾಜೆಕ್ಟ್ ಎಂಬುದು ಊಹೆಗೂ ನಿಲುಕದಂತಾಗಿದ್ದು ರಶ್ಮಿಕಾ ಇಲ್ಲಿ ಕಚ್ಚೆ ಸೀರೆಯುಟ್ಟು ಭರ್ಜಿ ಹಿಡಿದು ಹೋರಾಟಕ್ಕೆ ಇಳಿದ ವೀರ ವನಿತೆಯಂತೆ ಕಾಣುತ್ತಾರೆ. ಬೆಂಕಿ, ಸೈನಿಕರು ಕಾಡು ರಾತ್ರಿ ಎಲ್ಲವನ್ನೂ ನೋಡುತ್ತಿದ್ದರೆ ಇದು ಐತಿಹಾಸಿಕ ಚಿತ್ರದ ಕಥೆಯಾ ಎಂಬ ಅನುಮಾನವೂ ಬರುತ್ತದೆ.
ಯಾವ ಸಿನಿಮಾ ಅಂತ ಊಹಿಸಿ. ಯಾರಾದರೂ ಒಬ್ಬರು ಗೆಸ್ ಮಾಡಿದರೆ ನಾನು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಪ್ರಮಾಣ ಮಾಡುವುದಾಗಿ ಹೇಳಿದ್ದಾರೆ. ಸಿನಿಮಾದ ಶೀರ್ಷಿಕೆ ಹಾಗೂ ಇನ್ನಿತರ ಮಾಹಿತಿ ಜೂನ್ 27ರ ಬೆಳಗ್ಗೆ ರಿವೀಲ್ ಆಗುತ್ತೆ. ಆದರೆ ಅದಕ್ಕೂ ಮುನ್ನ ಊಹಿಸಿದವರಿಗೆ ರಶ್ಮಿಕಾ ಭೇಟಿ ಮಾಡುವ ಅವಕಾಶ ಸಿಗಲಿದೆ.