ಗೋವಾ, ಜೂ. 14 (DaijiworldNews/AA): ಕನ್ನಡ ಚಿತ್ರರಂಗದಲ್ಲಿ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಹಲವಾರು ಸ್ಟಾರ್ ಕಲಾವಿದರ ವಸ್ತ್ರ ವಿನ್ಯಾಸಕರಾಗಿ ಗುರುತಿಸಿಕೊಂಡಿರುವ ಹೆಸರಾಂತ ವಸ್ತ್ರ ವಿನ್ಯಾಸಕಾರ ಎಂ. ನವೀನ್ ಕುಮಾರ್ ಅವರಿಗೆ ಅಮೆರಿಕದ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಿರ್ಮಾಪಕ ಮೆಹುಲ್ ಕುಮಾರ್ ಮತ್ತು ಗೋವಾದ ಸಮಾಜ ಕಲ್ಯಾಣ ಸಚಿವರಾದ ಸುಭಾಷ್ ದೇಸಾಯಿ ಅವರು ನವೀನ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಫ್ಯಾಷನ್ ವಿನ್ಯಾಸ ಮತ್ತು ಉಡುಪು ನಿರ್ವಹಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನವೀನ್ ಕುಮಾರ್ ಅವರ ಸೇವೆಯನ್ನು ಗುರುತಿಸಿದ ಅಮೆರಿಕದ ಅಮೇರಿಕನ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿತ್ತು.