ಚೆನ್ನೈ, ,ಜೂ. 07 (DaijiworldNews/AK):ನಟಿ ಸಮಂತಾ ಋತ್ ಪ್ರಭು, ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದು ನಾಲ್ಕು ವರ್ಷ ಆಗಿದೆ. ಸಮಂತಾ ಮದುವೆಗೆ ಮುಂಚೆ ಇದ್ದ ಅನೇಕ ವಸ್ತುಗಳೊಟ್ಟಿಗೆ ತಮ್ಮ ಸೆಂಟಿಮೆಂಟ್ ಅನ್ನು ಅಂತ್ಯಗೊಳಿಸಿದ್ದಾರೆ. ಆದರೆ ಮದುವೆಗೆ ಮುಂಚೆ ಹಾಕಿಸಿಕೊಂಡಿದ್ದ ಒಂದು ಟ್ಯಾಟೂ ಅನ್ನು ಮಾತ್ರ ತೆಗೆಯದೆ ಹಾಗೆಯೇ ಉಳಿಸಿಕೊಂಡಿದ್ದರು. ಇದೀಗ ಅದನ್ನೂ ಅಳಿಸಿ ಹಾಕಿದ್ದಾರೆ.

'ಏ ಮಾಯ ಚೇಸಾವೆ’ ಸಿನಿಮಾ ಮೂಲಕಸಮಂತಾ ಋತ್ ಪ್ರಭು, ಚಿತ್ರರಂಗಕ್ಕೆ ಪರಿಚಯಗೊಂಡಿದ್ದು. ಅದೇ ಸಿನಿಮಾದಲ್ಲಿ ನಾಗ ಚೈತನ್ಯ ಕೂಡ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಸಮಂತಾ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಕಾರಣವಾಗಿತ್ತು. ಅಲ್ಲದೆ ಅವರಿಗೆ ನಾಗ ಚೈತನ್ಯ ಸಿಕ್ಕಿದ್ದು ಸಹ ಅದೇ ಸಿನಿಮಾದಿಂದ. ಇದೇ ಕಾರಣಕ್ಕೆ ‘ಏ ಮಾಯ ಚೇಸಾವೆ’ ಸಿನಿಮಾ ಮೇಲೆ ಸಮಂತಾಗೆ ವಿಶೇಷ ಪ್ರೀತಿ. ಆ ಸಿನಿಮಾದ ಹೆಸರನ್ನು ನಟಿ ಸಮಂತಾ ತಮ್ಮ ಬೆನ್ನ ಮೇಲೆ, ಕತ್ತಿನ ಕೆಳಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು.
ಆದರೆ ವಿಚ್ಛೇದನ ಆದ ಬಳಿಕ ಬೇರೆ ಕೆಲವು ಟ್ಯಾಟೂಗಳನ್ನು ಅಳಿಸಿ ಹಾಕಿದ್ದ ಸಮಂತಾ, ಇದೀಗ ‘ಏ ಮಾಯ ಚೇಸಾವೆ’ ಟ್ಯಾಟೂ ಅನ್ನು ಸಹ ಅಳಿಸಿ ಹಾಕಿದ್ದಾರೆ. ಕತ್ತಿನ ಕೆಳ ಭಾಗದಲ್ಲಿ ‘ವೈಎಂಸಿ’ (ಯೇ ಮಾಯ ಚೇಸಾವೆ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಸಮಂತಾರ ಇತ್ತೀಚೆಗಿನ ಕೆಲ, ಫೋಟೊ ವಿಡಿಯೋಗಳಲ್ಲಿಯೂ ಸಹ ಆ ಟ್ಯಾಟೂ ಕಾಣಿಸಿತ್ತು. ಆದರೆ ಇದೀಗ ಆ ಟ್ಯಾಟೂ ಸಮಂತಾ ಬೆನ್ನ ಮೇಲೆ ಇಲ್ಲ. ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಸಮಂತಾರ ಚಿತ್ರ ನೋಡಿದ ಕೆಲವು ನೆಟ್ಟಿಗರು ಇದನ್ನು ಗುರುತಿಸಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.