ಮುಂಬೈ,ಮೇ. 19 (DaijiworldNews/AK): ಕನ್ನಡದ ‘ಕೆಜಿಎಫ್’ಚಿತ್ರದಲ್ಲಿ ಯಶ್ ಜೊತೆ ನಟಿಸಿದ ಮೌನಿ ರಾಯ್ ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದಾರೆ. ಕನ್ನಡದ ನಟಿ ದಿಶಾ ಮದನ್ ಬಳಿಕ ನಟಿ ಮೌನಿ ರಾಯ್ ಕೂಡ ಕಾನ್ ಸಿನಿಮಾ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಅದಕ್ಕಾಗಿ ಫ್ರಾನ್ಸ್ಗೆ ತೆರಳಿದ್ದಾರೆ. ಶೋಲ್ಡರ್ಲೆಸ್ ಡ್ರೆಸ್ನಲ್ಲಿ ನಟಿ ಸಖತ್ ಆಗಿ ಮಿಂಚಿದ್ದಾರೆ.

ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಆಯೋಜಕರು ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಅದರಂತೆ ನಟಿ ಮೌನಿ ರಾಯ್ ಅವರಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ಅವರು ಕೂಡ ಈ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ಫ್ರಾನ್ಸ್ನಲ್ಲಿ ಈ ಸಿನಿಮಾ ಹಬ್ಬಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ನಡೆಯಲಿದೆ.