ಫ್ರಾನ್ಸ್, ಮೇ. 18 (DaijiworldNews/AA): ಕನ್ನಡದ ನಟಿ, ಡಿಜಿಟಲ್ ಕ್ರಿಯೇಟರ್ ದಿಶಾ ಮದನ್ ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದು, ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಫ್ರಾನ್ಸ್ನಲ್ಲಿ ಅದ್ಧೂರಿಯಾಗಿ ಕಾನ್ ಫಿಲ್ಮ್ ಫೆಸ್ಟಿವಲ್ಗೆ ಚಾಲನೆ ಸಿಕ್ಕಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್ನಲ್ಲಿ 70 ವರ್ಷಗಳ ಹಿಂದಿನ ಕೆಂಪು ಸೀರೆಯುಟ್ಟು ಮಿಂಚಿದ್ದಾರೆ.
ರೆಡ್ ಕಾರ್ಪೆಟ್ನಲ್ಲಿ ಶೋಲ್ಡರ್ ಲೆಸ್ ಬ್ಲೌಸ್ಗೆ ಕೆಂಪು ಕಾಂಚಿವರಂ ಸೀರೆಯನ್ನು ಡಿಫರೆಂಟ್ ಆಗಿ ಉಟ್ಟಿದ್ದಾರೆ. 70 ವರ್ಷಗಳ ಹಿಂದಿನ ಕಾಂಚಿವರಂ ಸೀರೆಗೆ ನಟಿ ಆಧುನಿಕತೆಯ ಸ್ಪರ್ಶ ನೀಡಿದ್ದಾರೆ. ಸೀರೆ ಜೊತೆ ಅವರು ಹಲವು ದಶಕಗಳಷ್ಟು ಹಳೆಯದಾದ ಆಭರಣಗಳನ್ನು ಕೂಡ ಧರಿಸಿ ರೆಡ್ ಕಾರ್ಪೆಟ್ನಲ್ಲಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ಇದು ನಡೆಯಲಿದೆ. ಪ್ರತಿದಿನವೂ ಒಂದೊಂದು ಬಗೆಯ ಧಿರಿಸಿನಲ್ಲಿ ನಟಿ ಮಿಂಚಿದ್ದಾರೆ. ವಿದೇಶಕ್ಕೆ ಹೋದರೂ ಭಾರತೀಯ ಸಂಸ್ಕೃತಿ ಮರಿಯದೇ ಸೀರೆಯುಟ್ಟ ನಟಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.