ಬೆಂಗಳೂರು, ಏ.30 (DaijiworldNews/AK):ಕಿರುತೆರೆಯ ಜನಪ್ರಿಯ ಸೀರಿಯಲ್ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ. ತಾಯಿಯಾಗಿರುವ ಶುಭಸುದ್ದಿಯನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಖುದ್ದಾಗಿ ನಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಮತ್ತು ಕಿರುತೆರೆ ಕಲಾವಿದರು ಕೌಸ್ತುಭಗೆ ಶುಭಕೋರುತ್ತಿದ್ದಾರೆ. ಕಳೆದ ವರ್ಷ ಏಪ್ರಿಲ್ನಲ್ಲಿ ಸಿದ್ಧಾಂತ್ ಜೊತೆ ಕೌಸ್ತುಭ ಮಣಿ ಅದ್ಧೂರಿಯಾಗಿ ಮದುವೆಯಾದರು. ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು.
ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟಿ ಕೌಸ್ತುಭ ಮಣಿ ಹಿರಿತೆರೆಯಲ್ಲೂ ನಟಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ಕೌಸ್ತುಭ ಕೂಡ ನಟಿಸಿದ್ದಾರೆ.