ಉಡುಪಿ, ಏ.20(DaijiworldNews/TA): ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ತನ್ನ ಕುಟುಂಬ ಸಮೇತ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಭೇಟಿ ಕೊಟ್ಟರು. ಇತ್ತೀಚಿಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯವನ್ನು ಕಂಡು ಸಂಭ್ರಮಿಸಿದರು.


ದೇವಾಲಯದ ನಿರ್ಮಾಣ ಹಾಗೂ ಇಲ್ಲಿನ ಶಿಲ್ಪಗಳ ರಚನೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡಿನಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ತಾಯಿಯ ಜೊತೆ ಸುನಿಲ್ ಶೆಟ್ಟಿ ತುಳು ನಾಡಿಗೆ ಬಂದಿದ್ದರು.
ಮೂಲತಃ ಮುಲ್ಕಿಯವರಾದ ಸುನಿಲ್ ಶೆಟ್ಟಿ ಇದೇ ವೇಳೆ ಕಾಪು ಕ್ಷೇತ್ರಕ್ಕೆ ಭೇಟಿಕೊಟ್ಟು, ತಾಯಿ ಮಾರಿಯಮ್ಮನ ದರ್ಶನ ಮಾಡಿಸಿದರು. ದೇಗುಲದ ವತಿಯಿಂದ ಸುನಿಲ್ ಶೆಟ್ಟಿ ಹಾಗೂ ಅವರ ತಾಯಿಯನ್ನು ಗೌರವಿಸಲಾಯಿತು.